ಮದುವೆಯಾದ ಮೇಲೆ ಮಹಿಳೆಯರು ಸಾಮಾನ್ಯವಾಗಿ ತಮ್ಮ ಹೆಸರನ್ನು ಬದಲಾಯಿಸುತ್ತಾರೆ. ಇದು ಕೆಲವರಿಗೆ ಇಷ್ಟವಾಗೋದಿಲ್ಲ, ಆದರೂ ಸಂಪ್ರದಾಯಕೋಸ್ಕರ ಮಹಿಳೆಯರು ಅದನ್ನು ಸ್ವೀಕರಿಸುತ್ತಾರೆ. ಇದಲ್ಲದೇ ಮದುವೆಯ ನಂತರ, ಕೆಲಸ ಮತ್ತು ಮನೆಯ ಜವಾಬ್ದಾರಿಗಳು ಬದಲಾಗುತ್ತವೆ. ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಸಾಧಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ನೀವು ಕೆಲವೊಂದು ವಿಷಯಗಳ ಬಗ್ಗೆ ತಪ್ಪು ಹೆಜ್ಜೆ ಇಡಬಾರದು.
ಮದುವೆಯ ಮೊದಲ ವರ್ಷವು ರೋಮಾಂಚನಕಾರಿ ಮತ್ತು ತುಂಬಾ ಸವಾಲಿನಿಂದ ಕೂಡಿರುತ್ತೆ. ವಿವಾಹವನ್ನು ನಿಮ್ಮ ಇಡೀ ಜೀವನದ ಅಡಿಪಾಯ ಎಂದು ಕರೆಯಬಹುದು, ಇದಕ್ಕಾಗಿ ಎರಡೂ ಕಡೆಯಿಂದ ಹೊಂದಾಣಿಕೆ ಅವಶ್ಯಕವಾಗಿದೆ. ಮದುವೆಯ ಮೊದಲ ವರ್ಷದಲ್ಲಿ ಜನರಿಗೆ ಯಾವ 6 ವಿಷಯಗಳು ತೊಂದರೆ ನೀಡುತ್ತವೆ ಎಂಬುದನ್ನು ತಿಳಿಯೋಣ.
ಮದುವೆಯ ಬಳಿಕ ಈ 6 ವಿಷಯಗಳು ಸಮಸ್ಯೆಯನ್ನುಂಟು ಮಾಡಬಹುದು
1. ಗುರುತಿನ ಸಮಸ್ಯೆ:
ಮಹಿಳೆಯರು ತಮ್ಮ ಗುರುತು ಮತ್ತು ಹೆಸರನ್ನು ಬದಲಾಯಿಸಲು ಇಷ್ಟಪಡೋದಿಲ್ಲ. ಆದರೂ ಬದಲಾಯಿಸಬೇಕಾಗುತ್ತೆ. ಮದುವೆಯ ನಂತರ, ಕೆಲಸ ಮತ್ತು ಮನೆಯ ಜವಾಬ್ದಾರಿಗಳು ಜೀವನದಲ್ಲಿ ಬದಲಾಗುತ್ತವೆ ಮತ್ತು ನೀವು ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನವನ್ನು ಸಾಧಿಸಬೇಕು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಐಡೆಂಟಿಟಿ ಉಂಟುಮಾಡಬಹುದು.
2. ಸ್ವಾತಂತ್ರ್ಯದ ಕೊರತೆ:
ಮದುವೆಯಾದ ಮೊದಲ ವರ್ಷದಲ್ಲಿ, ನೀವು ಅನೇಕ ಜನರಿಂದ ಸುತ್ತುವರಿಯಲ್ಪಟ್ಟಿರುತ್ತೀರಿ. ನೀವು ಏನು ಮಾಡುತ್ತಿದ್ದೀರಿ, ಎಲ್ಲಿಗೆ ಹೋಗುತ್ತಿದ್ದೀರಿ? ಅನ್ನೋ ಪ್ರಶ್ನೆಗಳು ಆರಂಭದಲ್ಲಿ ನಿಮ್ಮನ್ನು ಕಾಡಬಹುದು. ಇದಲ್ಲದೆ, ಆರ್ಥಿಕವಾಗಿ ಸ್ವಾತಂತ್ರ್ಯರಾಗಿರಲು ಅಥವಾ ಸ್ನೇಹಿತರೊಂದಿಗೆ ಸಮಯ ಕಳೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗುತ್ತೆ.
3. ಸಂಘರ್ಷ:
ವಿವಾಹದ ನಂತರ, ದಂಪತಿಗಳು ಒಂದೇ ಸೂರಿನಡಿ ಒಟ್ಟಿಗೆ ಸಮಯ ಕಳೆಯುತ್ತಾರೆ, ಆದ್ದರಿಂದ ಇಬ್ಬರ ನಡುವೆ ಕೆಲವೊಂದು ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಅಥವಾ ತಪ್ಪುಗಳನ್ನು ಹೊಂದುವುದು ಸಹ ಸ್ವಾಭಾವಿಕವಾಗಿದೆ. ಈ ವಿಷಯಗಳು ಮೊದಲ ವರ್ಷ ಹೆಚ್ಚಾಗಿ ಕಾಡುತ್ತದೆ.
4. ಭವಿಷ್ಯದ ಭಯ:
ಮದುವೆಯಾದ ಮೊದಲ ವರ್ಷದಲ್ಲಿ,ಈ ಸಂಬಂಧ ಭವಿಷ್ಯದಲ್ಲೂ ಸುಂದರವಾಗಿರುತ್ತದೆಯೇ ಅನ್ನೋ ಒಂದು ಸಣ್ಣ ಭಯ ಕಾಡದೇ ಇರದು. ಸಣ್ಣ ವಿಷಯಗಳಲ್ಲಿಯೂ ಸಹ, ನೀವು ಅಸುರಕ್ಷಿತರಾಗುತ್ತೀರಿ ಮತ್ತು ಅಂತಹ ಪರಿಸ್ಥಿತಿಯಲ್ಲಿ, ನೀವು ಭವಿಷ್ಯದ ಬಗ್ಗೆ ಚಿಂತಿಸಬಹುದು.
5. ಕುಟುಂಬದ ಮಧ್ಯಪ್ರವೇಶ:
ಮದುವೆಗೆ ಮೊದಲು, ಬಹುಶಃ ಕೇವಲ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರ ಸಂಬಂಧವಿತ್ತು, ಆದರೆ ಮದುವೆಯ ನಂತರ, ಎರಡು ಕುಟುಂಬಗಳು ಪರಸ್ಪರ ಸಂಬಂಧ ಹೊಂದುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬದೊಂದಿಗಿನ ಹೊಂದಾಣಿಕೆಯು ಒಂದು ದೊಡ್ಡ ಸವಾಲಾಗಿ ತೋರುತ್ತದೆ.
6. ಸಂಬಂಧದಲ್ಲಿ ನಂಬಿಕೆ:
ಹೊಸ ಸಂಬಂಧವನ್ನು ಬಲಪಡಿಸಲು ನೀವು ಹೆಚ್ಚು ಶ್ರಮಿಸಬೇಕಾಗಬಹುದು. ವಿಶ್ವಾಸ ಅಥವಾ ಬದ್ಧತೆಯು ಒಂದು ದಿನದಲ್ಲಿ ರೂಪುಗೊಳ್ಳುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ, ವಿವಾಹದ ಮೊದಲ ವರ್ಷವು ಸವಾಲಿನದ್ದಾಗಿರಬಹುದು. ಪತಿಯ, ಪತ್ನಿಯ ಅಥವಾ ಕುಟುಂಬದ ನಂಬಿಕೆ ಗಳಿಸಲು ನೀವು ಸಾಕಷ್ಟು ಶ್ರಮ ಪಡಬೇಕಾಗುತ್ತೆ.